ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತು (ತ್ರಿಮತಸ್ಥ) ಬೆಂಗಳೂರು(ರಿ), ದ.ಕ.,ಬೆಳ್ತಂಗಡಿ ತಾಲೂಕು ಇವರ ವತಿಯಿಂದ ತಾರೀಖು 28 /08/2022 ರ ರವಿವಾರ ಬೆಳ್ತಂಗಡಿ ಲಾಯಿಲ 'ಶ್ರೀ ಗುರು ರಾಘವೇಂದ್ರ ಮಠ' ದಲ್ಲಿ ನಡೆದ "ಕುಟುಂಬ ಮಿಲನ" ಕಾರ್ಯಕ್ರಮದಲ್ಲಿ 12 ಮಂದಿ ಅಧ್ಯಾಪಕರಿಗೆ 'ಗೌರವಾಭಿನಂದನಾ' ಕಾರ್ಯಕ್ರಮ ಮತ್ತು 28 ವಿದ್ಯಾರ್ಥಿಗಳಿಗೆ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಮಹೇಶ್ ಕಜೆಯವರು ಅತಿಥಿಗಳಾಗಿ ಭಾಗವಹಿಸಿ ಸಂಘಟನೆಯ ಆರಂಭ ಕುಟುಂಬದಿಂದ ಪ್ರಾರಂಭವಾಗಿ ಗ್ರಾಮವನ್ನು, ತಾಲೂಕನ್ನು, ಜಿಲ್ಲೆಯನ್ನು, ರಾಜ್ಯವನ್ನು ಮತ್ತು ದೇಶವನ್ನು ಗುರಿಯಾಗಿ ವಿಸ್ತರಿಸಬೇಕು ಎಂದು ಕರೆ ನೀಡಿದ್ದು ಮಾತ್ರವಲ್ಲದೆ ಗುರು ಸ್ಮರಣೀಯ ಮಹತ್ವ ಪ್ರತಿಭೆಗಳ ಗುರುತಿಸುವಿಕೆಯ ಅವಶ್ಯಕತೆ ಇವುಗಳ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು ಮಾತ್ರವಲ್ಲದೆ ಎಲ್ಲಾ ಸಮಾಜ ಬಂಧುಗಳು ಒಂದೇ ಛತ್ರದ ಅಡಿಯಲ್ಲಿ ಬರುವ ವಿಶಿಷ್ಟ ಉದ್ದೇಶದಿಂದ ಸ್ಥಾಪಿತವಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಾಮುಖ್ಯತೆಯನ್ನು ವಿವರಿಸಿದರು. ವೇದಿಕೆಯಲ್ಲಿ ಅರ್ಚಕ ಪುರೋಹಿತ ಪರಿಷತ್ತಿನ ಅಧ್ಯಕ್ಷರಾದ ರವಿಕುಮಾರ ಪದ್ಯಾಣ ರಾಘವೇಂದ್ರ ಭಟ್, ಕಾರ್ಯದರ್ಶಿ ಕೃಷ್ಣಕುಮಾರ್, ಶ್ರೀರಂಗ ಭಟ್, ಶಿವಕುಮಾರ್ ಬಾರಿತ್ತಾಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ತಿನ ಮತ್ತು AKBMS ನ ರಾಜ್ಯ ಕಾರ್ಯಕಾರಿಣಿಯ ಸದಸ್ಯರಾದ ಪೊಳಲಿ ಗಿರಿ ಪ್ರಕಾಶ ತಂತ್ರಿ, ಅಧ್ಯಾಪಕರಾದ ರಾಮಕೃಷ್ಣ ಬೆಲಾಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.