ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಮಹೇಶ್ ಕಜೆಯವರು ತಾರೀಖು 28/08/ 2022 ರಂದು ರವಿವಾರ ಬೆಳ್ತಂಗಡಿ ತಾಲೂಕು ನಿಡ್ಲೆ ಕುದ್ರಾಯ ಎಂಬ ಸ್ಥಳದಲ್ಲಿರುವ ಆದಿತ್ಯ ವ್ಯೂ ಇದರ 'ಪಂಚವಟಿ' ಸಭಾಂಗಣದಲ್ಲಿ ನೂತನ ವಿಪ್ರ ಸಂಗಮ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಧ್ಯೇಯೋದ್ದೇಶದ ಬಗ್ಗೆ, ಸದಸ್ಯತನದ ಅಭಿಯಾನದ ಬಗ್ಗೆ ಮತ್ತು ಸಂಘಟನೆಯ ಅವಶ್ಯಕತೆಯ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಡುಪಿ ಶೀರೂರು ಮಠದ ದಿವಾಣರಾದ ಶ್ರೀಯುತ ಡಾ!! ಉದಯಕುಮಾರ್ ಸರಳತ್ತಾಯ, ಅಖಿಲ ಕರ್ನಾಟಕ ತ್ರಿಮತಸ್ಥ ಅರ್ಚಕ ಪುರೋಹಿತ ಪರಿಷತ್ತು ಬೆಳ್ತಂಗಡಿ ಇದರ ಅಧ್ಯಕ್ಷರಾದ ಶ್ರೀಯುತ ರವಿಕುಮಾರ ಪಜಿರಡ್ಕ , ಸಂಘದ ಪದಾಧಿಕಾರಿಗಳು ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.