NEWS DETAILS

Image Description

ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಯವರ ಸಂದರ್ಶನವನ್ನು ಮಾಡಿ, ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದು,

ದಿನಾಂಕ ೨೭/೦೮/೨೦೨೨ ರಂದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ, ಬೆಂಗಳೂರು, ಇದರ ರಾಜ್ಯ ಕಾರ್ಯಕಾರಣಿಯ ಉಪಾಧ್ಯಕ್ಷರಾದ ಶ್ರೀ ಮಹೇಶ್ ಕಜೆಯವರು, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರು- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ರಾಜ್ಯ ಕಾರ್ಯಕಾರಣಿಯ ಸದಸ್ಯರು ಆದ ಶ್ರೀಯುತ ಕಶೆಕೋಡಿ ಸೂರ್ಯನಾರಾಯಣ ಭಟ್ ಮತ್ತು ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ರಾಜ್ಯ ಕಾರ್ಯಕಾರಣಿಯ ಸದಸ್ಯರಾದ– ಪೊಳಲಿ ಗಿರಿಪ್ರಕಾಶ್ ತಂತ್ರಿ ಯವರು ಚಾತುರ್ಮಾಸ್ಯ ವೃತದ ಆಚರಣೆಯಲ್ಲಿ ಇರತಕ್ಕಂತಹ  ಬಾಳೆಕುದ್ರು ಶ್ರೀಮಠ ನೃಸಿಂಹಾಶ್ರಮ ಶ್ರೀ ಯವರ  ಸಂದರ್ಶನವನ್ನು ಮಾಡಿ, ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದು, ಸರ್ವರ  ಒಳಿತನ್ನು ಶ್ರಿಮುಖದಲ್ಲಿ ಪ್ರಾರ್ಥನೆಯನ್ನು ಮಾಡಿ, ಅದೇ ಪ್ರಕಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ವತಿಯಿಂದ ಶ್ರೀಸನ್ನಿಧಾನಕ್ಕೆ ಗೌರವ ಫಲಕ ಮತ್ತು ಫಲಸಮರ್ಪಣೆಯನ್ನು ನೆರೆವೇರಿಸಿದರು.